ಅಭಿಪ್ರಾಯ / ಸಲಹೆಗಳು

ಸೌರ ನೀರಾವರಿ ಪಂಪ್ ಸೆಟ್

ಕೃಷಿ ಚಟುವಟಿಕೆಗಳಿಗಾಗಿ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ ಸೆಟ್ ಗಳು
ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ ಸೆಟ್ ಯೋಜನೆ
ರೈತರ ಕೊಳವೆಬಾವಿಗಳಿಗೆ 5 ಹೆಚ್ ಪಿ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ ಸೆಟ್ ಅಳವಡಿಸುವ ಯೋಜನೆಯನ್ನು 2014-15 ಸಾಲಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ಹಾಗೂ ಫಲಾನುಭವಿಗಳ ವಂತಿಗೆಯೊಂದಿಗೆ ಜಾರಿಗೆ ತರಲಾಗಿದೆ.
ಸದರಿ ಯೋಜನೆಯಡಿ ಪ್ರತಿ ಪಂಪ್‌ಸೆಟ್‌ಗೆ 2014-15 ರಿಂದ ಶೇ. 30 ರಷ್ಟು ಕೇಂದ್ರ ಸಹಾಯಧನ ಒದಗಿಸಲಾಗಿದ್ದು, 2017-18 ರಿಂದ ಶೇ.20 ರಷ್ಟು ಕೇಂದ್ರ ಸಹಾಯಧನ ಒದಗಿಸಲಾಗಿದೆ

ಸಾಮಾನ್ಯ ವರ್ಗದ ರೈತ ಫಲಾನುಭವಿಗಳಿಂದ ಪ್ರತಿ 5 ಹೆಚ್.ಪಿ ಸೌರ ಪಂಪ್‌ಸೆಟ್‌ಗೆ ರೂ.1.00 ಲಕ್ಷ ವಂತಿಗೆ ಭರಿಸಲಾಗಿದ್ದು, ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಉಚಿತವಾಗಿ ಸೌರ ಪಂಪ್‌ಸೆಟ್‌ಗಳನ್ನು ಅನುಷ್ಟಾನಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಸಹಾಯಧನ ಹಾಗೂ ಫಲಾನುಭವಿಗಳ ವಂತಿಗೆ ನಂತರ ಉಳಿದ ಸೌರ ಪಂಪ್‌ಸೆಟ್‌ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗಿರುತ್ತದೆ.

ನವೆಂಬರ್‌-2019ರ ಅಂತ್ಯಕ್ಕೆ ಒಟ್ಟು 3710 ಸಂಖ್ಯೆಯ (ಸಾಮಾನ್ಯ ವರ್ಗ: 3009 ಸಂಖ್ಯೆ, ಪ.ಜಾ: 487 ಸಂಖ್ಯೆ, ಪ.ಪಂ: 214 ಸಂಖ್ಯೆ) 5 ಹೆಚ್.ಪಿ ಸಾಮರ್ಥ್ಯದ ಸೌರ ಪಂಪ್ಸೆಟ್ ಗಳನ್ನು ಕೆ.ಆರ್.ಇ.ಡಿ.ಎಲ್‌ ವತಿಯಿಂದ ಅಳವಡಿಸಲಾಗಿರುತ್ತದೆ

ಕೇಂದ್ರ ಸರ್ಕಾರದಿಂದ ಜಾಲಮುಕ್ತ ಸೌರ ನೀರಾವರಿ ಪಂಪ್‌ಸಟ್‌ ಅಳವಡಿಸುವ ಕಾರ್ಯಕ್ರಮವನ್ನು PM-KUSUM (Pradhan Mantri Kisan Urja Suraksha evam Uttan Mahaabhiyan) Component-B ಯೋಜನೆಯಡಿಯಲ್ಲಿ ಮುಂದುವರೆಸಲಾಗಿರುತ್ತದೆ. ಎಂ.ಎನ್.ಆರ್.ಇ, ಕೇಂದ್ರ ಸರ್ಕಾರವು PM-KUSUM ಯೋಜನೆಯ ಮರ್ಗಸೂಚಿಗಳನ್ನು ದಿನಾಂಕ 22.07.2019 ರಂದು ಬಿಡುಗಡೆಗೊಳಿಸಿದೆ. PM-KUSUM, Component-B ಯೋಜನೆಯಡಿಯಲ್ಲಿ 7.5 ಹೆಚ್‌.ಪಿ ಸಾಮರ್ಥ್ಯದ ವರೆಗೆ ಕೇಂದ್ರ ಸಹಾಯಧನ ಒದಗಿಸಲಾಗುತ್ತಿದೆ, 7.5 ಹೆಚ್.ಪಿ ಗಿಂತ ಹೆಚ್ಚಿನ ಸಾಮರ್ಥ್ಯದ ಸೌರ ಪಂಪ್‌ಸೆಟ್‌ಗಳನ್ನು ಅನುಷ್ಠಾನಗೊಳಿಸಬಹುದಾಗಿರುತ್ತದೆ, ಆದರೆ ಕೇಂದ್ರ ಸಹಾಯಧನವನ್ನು 7.5 ಹೆಚ್.ಪಿ ವರೆಗೆ ಸೀಮಿತಗೊಳಿಸಲಾಗಿರುತ್ತದೆ.

PM-KUSUM, Component-B ಮರ್ಗಸೂಚಿಗಳನ್ವಯ ಬೆಂಚ್ ಮಾರ್ಕ್ ದರ ಅಥವ ಟೆಂಡರ್‌ ದರ ಇವುಗಳಲ್ಲಿ ಕಡಿಮೆ ದರಕ್ಕೆ ಎಂ.ಎನ್.ಆರ್.ಇ ಯಿಂದ ಶೇ.30 ರಷ್ಟು ಕೇಂದ್ರ ಸಹಾಯಧನ ಒದಗಿಸಲಾಗುತ್ತಿದೆ, ರಾಜ್ಯ ಸರ್ಕಾರವು ಶೇ. 30ರಷ್ಟು ಸಹಾಯಧನ ಒದಗಿಸಬೇಕಾಗಿದ್ದು ಹಾಗೂ ಫಲಾನುಭವಿಗಳ ವಂತಿಗೆ ಶೇ. 40 ರಷ್ಟು ಆಗಿರುತ್ತದೆ.

ಪ್ರಸ್ತುತ, ರಾಜ್ಯ ಸರ್ಕಾರದ ನಿರ್ದೇಶನದಂತೆ, 7.5 ಹೆಚ್.ಪಿ ಸಾಮರ್ಥ್ಯದ ವರೆಗೆ ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್‌ಸೆಟ್‌ ಗಳನ್ನು PM-KUSUM, Component-B ಅಡಿಯಲ್ಲಿ ಎಂ.ಎನ್.ಆರ್.ಇ ಯಿಂದ ಕೇಂದ್ರ ಸಹಾಯಧನ ಶೇ. 30 ರಷ್ಟು, ರಾಜ್ಯ ಸರ್ಕಾರದಿಂದ ಶೇ. 50 ರಷ್ಟು ಹಾಗೂ ಪ.ಜಾ/ಪ.ಪಂ ಫಲಾನುಭವಿಗಳ ವಂತಿಗೆಯಾಗಿ ಶೇ.20 ರಷ್ಟು ಪಾಲು ಹಂಚಿಕೆಯಂತೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. 

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಆನ್ ಲೈನ್ ಅರ್ಜಿ ನೊಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅನುಷ್ಠಾನ ಕಾರ್ಯವು ಪ್ರಗತಿಯಲ್ಲಿದೆ.

ಪ್ರಯೋಜನಗಳು
ಸದರಿ ಯೋಜನೆಯು ರೈತರಿಗೆ ಬಹಳ ಪ್ರಯೋಜನಕಾರಿಯಾಗಿದ್ದು, ಜಾಲದ  ವಿದ್ಯುತ್‌ ಮೇಲೆ ಅವಲಂಬಿತರಾಗದೇ ವರ್ಷದ ಬಹುತೇಕ ದಿನಗಳಲ್ಲಿ ಹಗಲು ವೇಳೆ ಸೌರ ಸಕ್ತಿಯ ಬಳಕೆಯಿಂದ ಬೆಳೆಗೆಳಿಗೆ ನೀರನ್ನು  ಕಲ್ಪಿಸಬಹುದಾಗಿದೆ. ಸಾಂಪ್ರಾದಾಯಿಕ ಇಂಧನವನ್ನು ಸಂರಕ್ಷಿಸಲು, ಕೆ.ಆರ್.ಇ.ಡಿ.ಎಲ್‌ ಸದರಿ ಯೋಜನೆಯನ್ನು ಉತ್ತೇಜಿಸುತ್ತಿದೆ.

ಇತ್ತೀಚಿನ ನವೀಕರಣ​ : 17-02-2022 07:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080